ಆನೆ ಕನ್ನಂಬಾಡಿ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ಗ್ರಾಮ. ಇದು ಹಾಸನ - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಹೊಳೆನರಸೀಪುರದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. == ನಾರಾಯಣಸ್ವಾಮಿ ದೇವಸ್ಥಾನ == ಆನೆ ಕನ್ನಂಬಾಡಿಯಲ್ಲಿರುವ ನಾರಾಯಣಸ್ವಾಮಿ ದೇವಸ್ಥಾನವು ಹೊಯ್ಸಳ ಸಾಮ್ರಾಜ್ಯದ ಅಷ್ಟು ಜನಪ್ರಿಯವಲ್ಲದ ದೇವಾಲಯವಾಗಿದೆ, ಇದನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಾಲಯವು ಮುಖ್ಯವಾಗಿ ಮೂರು ವಿಗ್ರಹಗಳನ್ನು ಹೊಂದಿದೆ - ಕೇಶವ (ನಾರಾಯಣಸ್ವಾಮಿ), ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ. ದೇವಾಲಯದ ಹೊರ ವಲಯಗಳಲ್ಲಿ ಗಣಪತಿ ಮತ್ತು ಮಹಿಷಾಸುರ ಮರ್ದಿನಿ (ಚಾಮುಂಡೇಶ್ವರಿ) ವಿಗ್ರಹಗಳೂ ಇವೆ. ಕ್ರಿ.ಶ.೧೨೪೪ಕ್ಕೆ ಸೇರಿದ ಒಂದು ಶಾಸನವು ಆನೆ ಕನ್ನಂಬಾಡಿಯನ್ನು 'ಅಗ್ರಹಾರ'ವನ್ನಾಗಿ ಪರಿವರ್ತಿಸಿ ಆ ಸಮಯದಲ್ಲಿ ದಾನವಾಗಿ ನೀಡಲಾಯಿತು ಎಂದು ತಿಳಿಸುತ್ತದೆ. ಹಾಗೂ ದೇವಾಲಯವು 12 ನೇ ಶತಮಾನದ ಆರಂಭದಲ್ಲಿ ಆನೆಗಳಿಗೆ ನೆಲೆಯಾಗಿ ಸೇವೆ ಸಲ್ಲಿಸಿದೆ ಎಂದು ತಿಳಿದುಬಂದಿದೆ. == ಉಲ್ಲೇಖಗಳು ==